ಗ್ಯಾಮ, ವ್ಯಾಸ್ಕೋಡ-
	ಸು. 1460-1524. ಪೋರ್ಚುಗೀಸ್ ನಾವಿಕ. ಭಾರತಕ್ಕೆ ಸಮುದ್ರಮಾರ್ಗ ಕಂಡುಹಿಡಿದವ. ಜನನ, ಆಲೇಂತೇಜೂó ಪ್ರಾಂತ್ಯದ ಸ್ಪೆನ್ಸ್‍ನಲ್ಲಿ. ಗ್ಯಾಮನ ಬಾಲ್ಯದ ಬಗ್ಗೆ ವಿವರಗಳು ತಿಳಿದುಬಂದಿಲ್ಲ. 1492ರಲ್ಲಿ ಕೆಲವು ಫ್ರೆಂಚ್ ಹಡುಗುಗಳನ್ನು ಹಿಡಿದುಕೊಳ್ಳುವ ಸೈನ್ಯಕಾರ್ಯಾಚರಣೆಯಲ್ಲಿ ಈತ ಪಾತ್ರವಹಿಸಿದ್ದ. ಗುಡ್‍ಹೋಪ್ ಭೂಶಿರವನ್ನು ಕಂಡುಹಿಡಿದ ಬಾರ್ತೊಲೋಮ್ಯು ಡೀಯಷನ ಕಾರ್ಯವನ್ನು ಮುಂದುವರಿಸಿ ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿಯುವ ಕಾರ್ಯದಲ್ಲಿ ಪೋರ್ಚುಗಲ್ಲ ದೊರೆ ಎರಡನೆಯ ಜಾನನಿಂದ ನಿಯುಕ್ತನಾದ. ಈ ಅನ್ವೇಷಣ ಯಾತ್ರೆ 1947ರಲ್ಲಿ ಜುಲೈ 8 ರಂದು ಲಿಸ್ಟನಿನಿಂದ ಹೊರಟಿತು. ಡ ಗ್ಯಾಮನ ವಶದಲ್ಲಿ ನಾಲ್ಕು ಹಡುಗುಗಳಿದ್ದವು. ಇವನ ಯಾತ್ರೆ ಕ್ಯಾನರೀ ದ್ವೀಪಗಳನ್ನು ತಲಪಿದ್ದು ಜುಲೈ 15 ರಂದು. ನಾವಿಕರ ತಂಡ ಆ ತಿಂಗಳ 26ರಂದು ಕೇಪ್ ವರ್ಡ್ ದ್ವೀಪಗಳನ್ನು ತಲುಪಿತು. ಆಗಸ್ಟ್ 3ರ ವರೆಗೂ ಅಲ್ಲೇ ತಂಗಿದ್ದು, ಗಿನೀ ಕೊಲ್ಲಿಯ ಪ್ರವಾಹಕ್ಕೆ ಸಿಲುಕದಂತೆ ದಕ್ಷಿಣ ಅಟ್ಲಾಂಟಿಕ್ ಮೂಲಕ ಬಳಸು ದಾರಿಯಲ್ಲಿ, ಗುಡ್‍ಹೋಪ್ ಭೂಶಿಖರದ ಕಡೆಗೆ ಸಾಗಿ, ನವೆಂಬರ್ 7 ರಂದು ಸೇಂಟ್ ಹೆಲೀನಾ ಕೊಲ್ಲಿ ಸೇರಿತು. ನವೆಂಬರ್ 16ರ ವರೆಗೂ ಅಲ್ಲೇ ಇದ್ದು ಅನಂತರ ಮುಂದುವರಿದ ಪ್ರಯಾಣ ಪ್ರತಿಕೂಲ ಮಾರುತಗಳಿಂದಾಗಿ ತಡವಾಗಿ ಗುಡ್‍ಹೋಪ್ ಭೂಶಿರವನ್ನು ಬಳಸಿ ಮಾಸೆಲ್ ಕೊಲ್ಲಿ ತಲುಪಿ, ಡಿಸೆಂಬರ್ 8ರಂದು ಅಲ್ಲಿಂದ ಹೊರಟು 25 ರಂದು ನಟ್ಯಾಲ್ ತೀರವನ್ನು ಸೇರಿತು. ಮರುವರ್ಷದ ಮಾರ್ಚ 2ರಂದು ಮೊeóÁಂಬಿಕ್ ತಲಪಿತು. ಗ್ಯಾಮ ಮತ್ತು ಅವನ ಸಹಪ್ರಯಾಣಿಕರು ಮುಸ್ಲಿಮರೆಂದು ನಂಬಿ ಅಲ್ಲಿನ ಸುಲ್ತಾನ ಗ್ಯಾಮನಿಗೆ ಇಬ್ಬರು ಚಾಲಕರ ನೆರವು ನೀಡಿದ. ಪೋರ್ಚುಗೀಸರು ಕ್ರೈಸ್ತರೆಂಬುದು ತಿಳಿದು ಆ ಚಾಲಕರಲ್ಲೊಬ್ಬ ಅವರನ್ನು ತ್ಯಜಿಸಿದ. ವಾಸ್ಕೋಡಗ್ಯಾಮ ಮೊಂಬಾಸವನ್ನು ತಲುಪಿದ್ದು ಏಪ್ರಿಲ್ 7ರಂದು. ಗ್ಯಾಮ ಮಲಿಂಡಿಯಲ್ಲಿ ತಂಗಿ, ಕಲ್ಲಿಕೋಟೆಗೆ ಹಾದಿ ಗೊತ್ತಿದ್ದ ಚಾಲಕನೊಬ್ಬನ ನೆರವಿನಿಂದ ಯಾನ ಮುಂದುವರಿಸಿದ. 23 ದಿನಗಳ ಕಾಲ ಹಿಂದೂಸಾಗರದಲ್ಲಿ ಸಾಗಿದ ಮೇಲೆ ಘಟ್ಟಗಳು ಕಾಣಿಸಿದುವು. ಮೇ 20ರಂದು ಗ್ಯಾಮ ಕಲ್ಲೀಕೋಟೆ ತಲುಪಿದ. ಭಾರತವನ್ನು ತಲಪಿದ್ದರ ಕುರುಹಾಗಿ ಗ್ಯಾಮ ಅಲ್ಲೊಂದು ಶಿಲಾಸ್ತಂಭ ನೆಟ್ಟ. ಅಲ್ಲಿಯ eóÁಮೊರಿನ್ ದೊರೆಯಿಂದ ಗ್ಯಾಮನಿಗೆ ಸ್ವಾಗತ ದೊರಕಿತು. ಆದರೆ ಅಲ್ಲಿಯ ಕೆಲವು ಮುಸ್ಲಿಂ ವ್ಯಾಪಾರಿಗಳ ವಿರೋಧದಿಂದಾಗಿ ದೊರೆಯೊಂದಿಗೆ ಆತ ಯಾವ ಒಪ್ಪಂದವನ್ನೂ ಮಾಡಿಕೊಳ್ಳಲಾಗಲಿಲ್ಲ.

ಆಗಸ್ಟ್ ತಿಂಗಳ ಕೊನೆಯಲ್ಲಿ ಡ ಗ್ಯಾಮ ಭಾರತದಿಂದ ಹಿಂದಕ್ಕೆ ಹೊರಟ. ಅಂಜೆದಿವ ದ್ವೀಪಕ್ಕೆ ಹೋಗಿ ಅಲ್ಲಿಂದ ಮಲಿಂಡಕ್ಕೆ ಪ್ರಯಾಣ ಬೆಳೆಸಿದ. ಮಾರುತಗಳು ಅನುಕೂಲಪ್ರದವಾಗಿರಲಿಲ್ಲವಾದ್ದರಿಂದ ಅರಬ್ಬೀ ಸಮುದ್ರವನ್ನು ದಾಟಲು ಅವನಿಗೆ ಮೂರು ತಿಂಗಳುಗಳ ಕಾಲ ಬೇಕಾಯಿತು. ನಾವಿಕರಲ್ಲಿ ಅನೇಕರು ಕಾಯಿಲೆಯಿಂದ ಸತ್ತರು. ಮರುವರ್ಷ ಮಾರ್ಚ್ ತಿಂಗಳಲ್ಲಿ ಗುಡ್‍ಹೋಪ್ ಭೂಶಿರವನ್ನು ಬಳಸಿ ಮುಂದುವರಿಯುವಾಗ ಬಿರುಗಾಳಿಯಿಂದ ತೊಂದರೆಯಾಯಿತು. ಉಳಿದಿದ್ದ ಎರಡು ಹಡಗುಗಳೂ ಪರಸ್ಪರ ಬೇರ್ಪಟ್ಟವು. ಗ್ಯಾಮ ಟರ್ಸೇಯಿರ ದ್ವೀಪವನ್ನು ತಲುಪಿ ತನ್ನ ಹಡಗನ್ನುಲಿಸ್ಬನಿಗೆ ಮುಂದಾಗಿ ಕಳಿಸಿದ. ಅವನು ಲಿಸ್ಟನ್ ತಲಪಿದ್ದು ಸೆಪ್ಟೆಂಬರ್ 9ರಂದು. ಟರ್ಸೇಯಿರದಲ್ಲಿ ತೀರಿಕೊಂಡಿದ್ದ ಸೋದರನಿಗಾಗಿ ಶೋಕವನ್ನಾಚರಿಸಿ ಸೆಪ್ಟೆಂಬರ್ 18ರಂದು ಗ್ಯಾಮ ವಿಜಯ ನಗರ ಮೆರವಣಿಗೆಯಲ್ಲಿ ಲಿಸ್ಟನ್ ಪ್ರವೇಶಿಸಿದ. ದೊರೆ 1ನೆಯ ಮ್ಯಾನ್ಯುಯೆಲ್ ಅವನಿಗೆ ಡಾಂ ಎಂಬ ಬಿರುದನ್ನೂ ವರ್ಷಾಶನವನ್ನೂ ನೆಲದ ಉಂಬಳಿಯನ್ನೂ ಕೊಟ್ಟು ಗೌರವಿಸಿದ.

	ಅನಂತರ ದೊರೆಯ ಆದೇಶದಂತೆ ಕವ್ರಾಲ್ ಭಾರತಕ್ಕೆ ಹೋದ. ಕಲ್ಲಿಕೋಟೆಯಲ್ಲಿ ಕೋಠಿಯೊಂದನ್ನು ಸ್ಥಾಪಿಸಿದ. ಅಲ್ಲಿ ಉಳಿದಿದ್ದ ಪೋರ್ಚುಗೀಸರು ಕವ್ರಾಲನ ನಿರ್ಗಮನಾಂತರ ಕೊಲೆಗೆ ಈಡಾದರು. ಇದಕ್ಕೆ ಪ್ರತೀಕಾರ ಮಾಡಬೇಕೆಂಬ ಸೂಚನೆಯೊಂದಿಗೆ ದೊರೆ ವ್ಯಾಕೋ ಡ ಗ್ಯಾಮನನ್ನು ಭಾರತಕ್ಕೆ ಕಳುಹಿಸಿದ. ಅವನಿಗೆ ಭಾರತ ಸಮುದ್ರದ ಅಡ್ಮಿರಲ್ ಎಂಬ ಬಿರುದು ದತ್ತವಾಯಿತು. ದೊರೆ ಅವನಿಗೆ ಹಲವಾರು ವ್ಯಾಪಾರ ಸವಲತ್ತುಗಳನ್ನೂ ನೀಡಿದ. ಗ್ಯಾಮ ಭಾರತವನ್ನು ತಲುಪಿದೊಡನೆಯೇ ಕಲ್ಲೀಕೋಟೆಯನ್ನು ಉಡಾಯಿಸಿ, ಭಾರತದ ಯುದ್ಧನೌಕೆಗಳನ್ನು ನಿರ್ನಾಮ ಮಾಡಿದ. ಅನಂತರ ಕೊಚ್ಚಿಗೆ ಹೋಗಿ ಅಲ್ಲಿ ತನ್ನ ದೇಶಕ್ಕೆ ಅನುಕೂಲವಾದ ವ್ಯಾಪಾರ ಒಪ್ಪಂದ ಮಾಡಿಕೊಂಡು ಸ್ವದೇಶಕ್ಕೆ ಹಿಂದಿರುಗಿದ (1503). ಅವನ ವ್ಯಾಪಾರದಿಂದಾಗಿ ಗ್ಯಾಮ ಪೋರ್ಚುಗಲಿನಲ್ಲಿಯೇ ಅತ್ಯಂತ ಶ್ರೀಮಂತನಾದ. ಅವನು ಅನಂತರ ವಿಶ್ರಾಂತ ಜೀವನ ನಡೆಸಿದರೂ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ದೊರೆಗೆ ಸಲಹೆ ನೀಡುತ್ತಿದ್ದ. 1519ರಲ್ಲಿ ಅವನಿಗೆ ವಿಡಿಗೈರಿರದ ಕೌಂಟ್ ಪದವಿ ದೊರಕಿತು. 1524ರಲ್ಲಿ ಆತ ಭಾರತದ ವೈಸ್ ರಾಯ್ ಆದ. ಅವನು ತೀರಿಕೊಂಡದ್ದು 1524ರ ಡಿಸೆಂಬರ್ 24ರಂದು.						(ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ